ಭಾನುವಾರ, ಮಾರ್ಚ್ 15, 2020

ಕೊಡಚಾದ್ರಿ ತಾಣ  ಒಂದು ಸುಂದರ ಯಾನ

ಪಕ್ಷಿಮ ಘಟ್ಟ ತಪ್ಪಲಿಗೆ ಹೋಗುದೆಂದರೆ ಅದು ಮೈ ರೋಮಾಂಚನಗೊಳಿಸುವ ವಿಷಯ, ಅದು ನನಗೆ ತಿಳಿದದ್ದು ನನ್ನ ಗೆಳೆಯನಿಂದ .
ಕೊಡಚಾದ್ರಿ ಬೆಟ್ಟ ಏರಲು ಒಂದು ದಿನವು ನಿಗಧಿಯೂ  ಆಯಿತು ,ಹಾಗೆ ಪ್ರಯಾಣವು ಶುರು ಆಯಿತು .  ಎಲ್ಲರೂ  ksr ರೈಲು  ನಿಲ್ದಾಣದಲ್ಲಿ ಬಂದು ಸೇರಿದೆವು .  ಆಗ ನಮ್ಮ ತಂಡ ೫ ಆಗಿತ್ತು . ನಾನು,ಹರ್ಷ,ಮೂರ್ತಿ,ಸತೀಶ ಮತ್ತು ರಕ್ಷಕ್ . ಶಿವು ಶಿವಮೊಗ್ಗದಲ್ಲಿ  ನಮ್ಮ ಸೇರುವ ಭರವಸೆ ನೀಡಿದ್ದ . ೧೧ ಗಂಟೆಗೆ ತಾಳಗುಪ್ಪ ಎಕ್ಸ್ಪ್ರೆಸ್  ಮಂದಗತಿಯಲ್ಲಿ  ಬಂದು ಪ್ಲಾಟ್ಫಾರ್ಮ್ ಸೇರಿತು .
ನಾವು ತೀವ್ರ ಗತಿಯಲ್ಲಿ ರೈಲು ಏರಿ ಸೀಟ್ ಹಿಡಿದೆವು. ಅದರೆ ಟ್ರೈನ್ ಅಷ್ಟೊಂದು ರಶ್ ಇರಲಿಲ್ಲ .
ನಾವು ಮೇಲಿನ ಕಂಪಾರ್ಟ್ ನ ಸೀಟ್ ಹಿಡಿದೆವು . ಮೂರ್ತಿ ರಕ್ಷಕ್ ಒಂದು ಕಡೆ ,ಸತೀಶ್ ಹರ್ಷ ಮತ್ತೊಂದು ಕಡೆ ,ಎಲ್ಲರ ಬ್ಯಾಗಗಳ ಜೊತೆ ನಾನು ಮತ್ತೊಂದು ಕಡೆ .
   
      ರೈಲು ೧೧:೧೫ ಕ್ಕೆ ಗಾಡಿ ಹೊರಟಿತು . ಎಲ್ಲರೂ  ಬೇರೆ ಬೇರೆ ಕಡೆ ಇದ್ದುದರಿಂದ ಮಾತು ಕಡಿಮೆ ಇತ್ತು . ಮಾತಿಲ್ಲದೆ ಮೌನ ಅವರಿಸುತಿತ್ತು .ಮೌನ ಮನಸ್ಸನ್ನು ಶಾಂತ  ಗೊಳಿಸುತಿತ್ತು .ಶಾಂತ ಮನಸು ನಿಷಾಧಿಪತಿಯ ಒಳ ಸೇರುತಿತ್ತು . ಸರಿಯಾದ ನಿದ್ದೆ ಯಾರು ಮಾಡಿಲ್ಲವಾದರೂ ಸಣ್ಣ ಸಣ್ಣ ನಿದ್ಧೆಗಳು ಮನವ ತಣ್ಣಗೆ ಇರಿಸುತಿತ್ತು. ಗಡಿ ಶಿವಮೊಗ್ಗ ದಾಟಿದ ಮೇಲೆ ನಿದ್ದೆ ದೂರ ಆಗಿತ್ತು . ಮುಂಜಾನೆಯ  ತಂಗಾಳಿ ತೇಲಿ ಬರುತಿತ್ತು . ಶಿವಮೊಗ್ಗ ದಾಟಿದ ಮೇಲೆ ಸಿಗುವ ಆ  ಪ್ರಕೃತಿ ಮಾಟ ಬಲು ಸೂಪರ್ . ಇದು ಮಲೆನಾಡು ಮತ್ತು ಬಯಲುಸೀಮೆಯ ಸಮ್ಮಿಲನ .

ಅಂತೂ  ಇಂತೂ ಗಾಡಿ ಸಾಗರ ತಲುಪಿದಾಗ ಘಂಟೆ ೭ ರ ಆಸುಪಾಸಿಗೆ ತಲುಪಿತ್ತು .  ಸಾಗರ ಸಾಗರದಷ್ಟು ವಿಶಾಲವಾಗಿಲ್ಲದಿದ್ದರು ಸ್ವಲ್ಪ ದೊಡ್ಡ ನಗರವೇ ರೈಲು ನಿಲ್ದಾಣಹತ್ತಿರವೆ ಬಸ್ ಸ್ಟಾಂಡ್,   ಮುಖ್ಯ  ಬಸ್ ನಿಲ್ದಾಣಕ್ಕೆ ಕುಂದಾಪುರ ಕಡೆಗೆ ಹೋಗುವ ಬಸ್ಸು ಬರುವುದಿಲ್ಲಎಂದಾಗ ನಮ್ಮ ನಡಿಗೆ ಶುರುವಾಯಿತು, ಸಾಗರದ ಹದಿ ಬೀದಿಗಳನ್ನು ನೋಡುತ್ತಾ, ಆಗತಾನೆ ಎದ್ದು ತಮ್ಮ ತಮ್ಮ ಕೆಲಸಕ್ಕೆ ಹೋರಾಡುತ್ತಿರುವ ನಾಯಿಗಾಲ ಹಿಂಡು ಬೀದಿ ದನಗಳ ಗುಂಪು, ಬಸವಗಳು ಎಂದು ಸಾಗರಕ್ಕೆ ಬಂಡ ಅಥಿತಿಗಳ ಸ್ವಾಗತಕ್ಕೆ ತಯಾರಾಗುವಹಾಗೆ ನಮಗೆ ಕಂಡಿತು. 
       
       ಬಸ್ಸು ನಮಗಾಗಿ ಕಾಯುತಿತ್ತು , ನಿರ್ವಾಹಕ ಬಳಿ ಕೇಳಿದಾಗ ಹೋರಾಡಲು ಇನ್ನು ೧೦ ನಿಮಿಷ ಬಾಕಿ ಇತ್ತು ಆಗ ನಮ್ಮೆಲ್ಲರ ಉದರ ಹೋಟೆಲ್ ಕಡೆ ಹೊರಟಿತ್ತು.ಹೋಟೆಲನಲ್ಲಿ ಇಡ್ಲಿಯನ್ನು ಪಾರ್ಸೆಲ್ ಮಾಡಿಕೊಂಡು ಹೊರಟೆವು. ಬಸ್ಸು ಸಾಗರ ನಗರವನ್ನು ಬಿಟ್ಟು ಮೆಲ್ಲನೆ ಮಲೆನಾಡಿನ ಸೆರಗನ್ನು ಹೊಕ್ಕಿತು


















ಶನಿವಾರ, ಏಪ್ರಿಲ್ 22, 2017